1.32 ಕೋಟಿ ಕಳವು ಮಾಲು ವಶ

ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ನಗರದ ವಿವಿಧ ಪೊಲೀಸ್‍ಠಾಣಾ ವ್ಯಾಪ್ತಿಯಲ್ಲಿಚಿನ್ನಾಭರಣ, ಮೊಬೈಲ್ ದ್ವಿಚಕ್ರ ವಾಹನ, ಕಾರು ಮುಂತಾದಅಪರಾಧಕೃತ್ಯದಲ್ಲಿ ಭಾಗಿಯಾಗಿದ್ದ 24 ಆರೋಪಿಗಳನ್ನು ಬಂಧಿಸಿ ಸುಮಾರು 1 ಕೋಟಿ 32ಲಕ್ಷ ರೂ. ಬೆಲೆ ಬಾಳುವ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಕಬ್ಬನ್ ಪಾರ್ಕ್ ಹಾಗೂ ಅಶೋಕ್ ನಗರ ಮತ್ತು ಶೇಷಾದ್ರಿಪುರ ಪೊಲೀಸರುಜಂಟಿಕಾರ್ಯಾಚರಣೆ ನಡೆಸುವ ಮೂಲಕ 13 ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ ಬಂಧಿಸುವ ಮೂಲಕ ದುಬಾರಿ ಬೆಲೆಯ ಮೊಬೈಲ್‍ಗಳು ಹಾಗೂ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ 13 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಅಶೋಕನಗರ, ಸದ್ದುಗುಂಟೆಪಾಳ್ಯ, ಹೈಗೌಂಡ್ಸ್, ಮಾಗಡಿರಸ್ತೆ, ಶ್ರೀರಾಮಪುರ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್, ದ್ವಿಚಕ್ರ ವಾಹನ ಕಳವು ಮಾಡಿ ಅವುಗಳನ್ನು ಬೇರೆರಾಜ್ಯ ಮತ್ತು ಜಿಲ್ಲೆಗಳಲ್ಲಿ ಮಾರಾಟ ಮಾಡುವಚಾಲಕಿತನ ಪ್ರದರ್ಶನ ಮಾಡುತ್ತಿದ್ದರು. ಶೇಷಾದ್ರಿಪುರ ಪೊಲೀಸರು 6 ಜನ ಆರೋಪಿಗಳನ್ನು ದಸ್ತಗಿರಿ ಮಾಡಿಅವರಿಂದ 13 ವಿವಿಧಕಂಪನಿಯ 80 ಸಾವಿರರೂ. ಮೊಬೈಲ್ ಪೋನ್‍ಗಳನ್ನು ಜಪ್ತಿಮಾಡಿದ್ದಾರೆ. ಆರೋಪಿಗಳು ಬೆಳಗಿನ ಜಾವಓಡಾಡುವರನ್ನೇ ಪ್ರಮುಖವಾಗಿಗುರಿ ಮಾಡಿಕೊಂಡು ಮೊಬೈಲ್‍ದರೋಡೆಯಲ್ಲಿ ನಿರತರಾಗಿದ್ದರು. ಹಲಸೂರುಗೇಟ್ ಪೊಲೀಸರು ಮತ್ತು ಸಿಬ್ಬಂದಿ ಬೆಂಗಳೂರು ಮೂಲದಆರೋಪಿಯನ್ನು ಬಂಧಿಸಿ ಆತನಿಂದ 14ಕೆಜಿ 380 ಗ್ರಾಂತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯುತಾನು ಕೆಲಸ ಮಾಡುತ್ತಿದ್ದಅಂಗಡಿಯಿಂದಲೇ ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವುದುತನಿಖೆಯಿಂದ ಸಾಬಿತಾಗಿದೆ. ವಿಲ್ಸನ್‍ಗಾರ್ಡ್‍ನ್ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ಮನೆ ಬೀಗ ಒಡೆದುಚಿನ್ನದ ಸರ ಮತ್ತುದುಬಾರಿ ಬೆಲೆಯ ಮೊಬೈಲ್‍ಗಳನ್ನು ಕಳವು ಮಾಡುತ್ತಿದ್ದಆರೋಪಿಯನ್ನು ಬಂಧಿಸಿದ್ದು, ಆತನಿಂದ 500ಗ್ರಾಂ ತೂಕದ ಬೆಳ್ಳಿ ಚೈನ್, ಬೆಳ್ಳಿ ಬ್ರಾಸ್‍ಲೈಟ್ ಹಾಗೂ ಅನೇಕ ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲಸೂರುಗೇಟ್ ಪೊಲೀಸರು ಮಾಗಡಿ ಮೂಲದ ಮೂವರು ಆರೋಪಿಗಳನ್ನು ಬಂಧಿಸಿ 41 ಕೆಜಿ ಬೆಳ್ಳಿ ಗಟ್ಟಿ 196 ಚಿನ್ನ, 4ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸರುಠಾಣೆಯ ವ್ಯಾಪ್ತಿಯಲ್ಲಿ ಕಳವಾಗಿದ್ದ, ಚಿನ್ನದ ಸರ, ದ್ವಿಚಕ್ರ ವಾಹನ, ಮೊಬೈಲ್, ಲ್ಯಾಪ್‍ಟಾಪ್ ಸೇರಿದಂತೆ 6.5ಲಕ್ಷ ರೂ. ಬೆಲೆ ಬಾಳುವ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಎಸ್‍ಜೆ ಪಾರ್ಕ್ ಪೊಲೀಸರುಆಂಧ್ರಪ್ರದೇಶದಆರೋಪಿ ಒಬ್ಬನನ್ನುದಸ್ತಗಿರಿ ಮಾಡಿಆತನಿಂದಎರಡು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ದ್ವಿಚಕ್ರ ವಾಹನ ಮತ್ತು ಮೊಬೈಲ್ ಪೋನ್‍ಗಳನ್ನ ವಶಪಡಿಸಿಕೊಂಡಿದ್ದಾರೆ. ಶೇಷಾದ್ರಿಪುರಂ ಪೊಲೀಸರು ಹುಬ್ಬಳ್ಳಿ ಮೂಲದಆರೋಪಿಯನ್ನು ಬಂಧಿಸಿ 45ಲಕ್ಷ ರೂ. ಮೌಲ್ಯದ 7 ಸ್ವಿಪ್ಟ್ ಕಾರ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಟ್ರಾವೆಲ್ ಮಾಲೀಕರಿಂದ ಬಾಡಿಗೆ ಪಡೆದ ವಾಹನಗಳನ್ನು ಬೇರೆಯವರಿಗೆ ಮಾರಾಟ ಮಾಡಿ ತಲೆತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‍ಆಯುಕ್ತ ಸಂದೀಪ್ ಪಾಟೀಲ್, ಐಪಿಎಸ್, ಕೇಂದ್ರ ವಿಭಾಗದಉಪಪೊಲೀಸ್‍ಆಯುಕ್ತ ಶ್ರೀನಿವಾಸ ಗೌಡ, ಐಪಿಎಸ್ ಮಾರ್ಗದರ್ಶನದಲ್ಲಿಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಡಿ.ಎಸ್.ರಾಜೇಂದ್ರ, ಹಲಸೂರುಗೇಟ್ ಉಪವಿಭಾಗದ ಎಸಿಪಿ ನಾರಾಯಣಸ್ವಾಮಿ ಮತ್ತು ಶೇಷಾದ್ರಿಪುರಂ ಉಪವಿಭಾಗದ ಎಸಿಪಿ ಚಂದನ್‍ಕುಮಾರ್ ನೇತೃತ್ವದಲ್ಲಿ ಪೊಲೀಸ್‍ಇನ್ಸ್‍ಪೆಕ್ಟರ್ ಸಿ.ಜೆ.ಚೈತನ್ಯ, ಎಂ.ಎಸ್.ರವಿ, ಆರ್.ಜಗದೀಶ್, ಎ.ರಾಜು, ಶ್ರೀನಿವಾಸ್, ಸತೀಶ್‍ಕುಮಾರ್ ಮಾಡಿದ್ದಾರೆ. ಈ ಪತ್ತೆಕಾರ್ಯವನ್ನು ನಗರ ಪೊಲೀಸ್‍ಆಯುಕ್ತರು ಪ್ರಶಂಸಿಸಿದ್ದಾರೆ. .

-->

Leave a Replay

Your email address will not be published. Required fields are marked *